Big Bulletin | Pro Pakistan Slogans In Clubhouse Group, Bengaluru Cops Register Case | HR Ranganath | Aug 17, 2022

1 просмотров 17.08.2022 00:06:37

Описание

ರಾಜ್ಯದಲ್ಲಿನ್ನೂ ಸಾವರ್ಕರ್ ವಿವಾದವೇ ಮುಗಿದಿಲ್ಲ. ಇದೇ ಹೊತ್ತಲ್ಲಿ ಗೋಡ್ಸೆ ಪೋಸ್ಟರ್ ಕೂಡ ಕಾಣಿಸಿಕೊಂಡಿದೆ. ಮಧುಗಿರಿಯ ದಂಡಿನ ಮಾರಮ್ಮ ದೇಗುಲದ ಬಳಿ ಅಳವಡಿಸಲಾದ ಫ್ಲೆಕ್ಸ್‍ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಜೊತೆ ಗಾಂಧೀಜಿ ಹಂತಕ ನಾಥೂರಾಮ್ ಗೋಡ್ಸೆ ಫೋಟೋ ಕೂಡ ಸ್ಥಾನ ಪಡೆದುಕೊಂಡಿದೆ. ಕಿಡಿಗೇಡಿಗಳ ಕೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಪುರಸಭೆ ಮತ್ತು ಪೊಲೀಸರು ವಿವಾದಿತ ಫ್ಲೆಕ್ಸ್ ತೆರವು ಮಾಡಿದ್ದಾರೆ. ಇಷ್ಟು ದೊಡ್ಡ ಫ್ಲೆಕ್ಸ್ ಅಳವಡಿಸಿದ್ದು ಯಾರು ಎಂಬ ಬಗ್ಗೆ ಇದೀಗ ಪೊಲೀಸರು ತನಿಖೆ ನಡೆಸಿದ್ದಾರೆ. ಅತ್ತ ಉಡುಪಿಯ ಬ್ರಹ್ಮಗಿರಿ ವೃತ್ತದಲ್ಲಿ ಸಾವರ್ಕರ್ ಬೃಹತ್ ಕಟೌಟ್ ರಾರಾಜಿಸುತ್ತಿದೆ. ಎಸ್‍ಡಿಪಿಐ, ಪಿಎಫ್‍ಐ ಆಕ್ರೋಶದ ನಡ್ವೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪುಷ್ಪಾರ್ಚನೆ ಮಾಡಿ ಸಂಭ್ರಮಿಸಿದ್ರು. ಇದೇ ವೃತ್ತದಲ್ಲಿ ಸಾವರ್ಕರ್ ಪುತ್ಥಳಿ ಅನಾವರಣ ಮಾಡ್ತೇವೆ ಎಂದು ಘೋಷಿಸಿದ್ರು. ಅಲ್ಲದೇ, ಕಾಂಗ್ರೆಸ್ ನಾಯಕರ ಮನೆ ಮೇಲೆ ಸಾವರ್ಕರ್ ಫ್ಲೆಕ್ಸ್ ಹಾಕ್ತೇವೆ ಎಂದು ಸವಾಲೆಸೆದ್ರು. ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ನೋಡಿದ್ರು. ಆದ್ರೆ, ಪೊಲೀಸರು ಅವಕಾಶ ಮಾಡಿಕೊಡಲಿಲ್ಲ. ಈ ಮಧ್ಯೆ, ಮತ್ತೊಂದು ಜಾಲ ತಾಣ ಕ್ಲಬ್‍ಹೌಸ್‍ನಲ್ಲಿ ಕಿಡಿಗೇಡಿಗಳು ತಮ್ಮ ಡಿಪಿಯಲ್ಲಿ ಪಾಕ್ ಧ್ವಜ ಹಾಕಿದ್ದು, ಯಾರು ಏನೇ ಮಾಡಿದ್ರೂ ಏನೂ ಮಾಡೋಕೇ ಆಗಲ್ಲ ಎಂದು ಸವಾಲ್ ಬೇರೆ ಹಾಕಿದ್ದಾರೆ. ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ಪೊಲೀಸರು, ದೇಶದ್ರೋಹಿಗಳ ಪತ್ತೆಗೆ ಮುಂದಾಗಿದ್ದಾರೆ #publictv #hrranganath #bigbulletin

Комментарии

Теги:
Bulletin, Pakistan, Slogans, Clubhouse, Group, Bengaluru, Cops, Register, Case, Ranganath, 2022