Amulya Surprises Her Husband Jagadish By Inviting Darshan To His Birthday Party

1 просмотров 06.07.2021 00:03:42

Описание

#Amulya Surprises Her Husband Jagadish By Inviting #Darshan To His Birthday Party. ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಅಮೂಲ್ಯ ಅವರು ತಮ್ಮ ಪತಿ ಜಗದೀಶ್ ಹುಟ್ಟುಹಬ್ಬದ ಪ್ರಯುಕ್ತ ಸರ್ಪ್ರೈಸ್ ಕೊಟ್ಟಿದ್ದಾರೆ. ಇತ್ತೀಚೆಗಷ್ಟೆ ಜಗದೀಶ್ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಮೂಲ್ಯ ಪತಿಗೆ ಸರ್ಪ್ರೈಸ್ ಕೊಡಬೇಕೆಂದು ಬರ್ತ್ ಡೇ ಪಾರ್ಟಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಸ್ಪೆಷಲ್ ಅತಿಥಿಯಾಗಿ ಆಹ್ವಾನಿಸಿದ್ದರು. ಅಮೂಲ್ಯ ಬಾಲನಟಿ ಆಗಿದ್ದಾಗನಿಂದಲೂ ದರ್ಶನ್ ಜೊತೆಗೆ ಉತ್ತಮ ಭಾಂದವ್ಯವಿದೆ. ಹೀಗಾಗಿ ಅಮೂಲ್ಯ ಕರೆದಿದ್ದರಿಂದ ದರ್ಶನ್ ಪಾರ್ಟಿಗೆ ಬಂದು ಅಮೂಲ್ಯ ಪತಿಗೆ ಶಾಕ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ಜಗದೀಶ್ ಅವರಿಗಾಗಿ ಅಮೂಲ್ಯ ವಿಶೇಷವಾದ ಕೇಕ್ ಸಿದ್ಧಪಡಿಸಿದ್ದರು. ಅದರಲ್ಲಿ ಅಮೂಲ್ಯ ಮತ್ತು ಜಗದೀಶ್ ಅವರ ಫೋಟೋ ಹಾಕಲಾಗಿತ್ತು. ವಿಶೇಷ ಅತಿಥಿಯಾಗಿ ಆಗಮಿಸಿದ್ದ ದರ್ಶನ್ ಜಗದೀಶ್ ಅವರ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದರು. ಬಳಿಕ ಪರಸ್ಪರ ಮೂವರು ಕೇಕ್ ತಿನ್ನಿಸಿ ಸಂಭ್ರಮಿಸಿದ್ದಾರೆ. ಈ ಪಾರ್ಟಿಯಲ್ಲಿ ದರ್ಶನ್ ಮಾತ್ರವಲ್ಲದೇ ಬಿಗ್ ಬಾಸ್ ಸ್ಪರ್ಧಿ ಭುವನ್ ಗೌಡ, ಪ್ರಿಯಾಂಕಾ ಉಪೇಂದ್ರ, ಹರ್ಷಿಕಾ ಪೂಣಚ್ಚ ಹಾಗೂ ಶಿಲ್ಪಾ ಗಣೇಶ್ ಸೇರಿದಂತೆ ಅನೇಕ ಸಿನಿತಾರೆಯನ್ನು ಪಾಲ್ಗೊಂಡಿದ್ದರು. ಜಗದೀಶ್ ಅವರು ತಮ್ಮ ಹುಟ್ಟುಹಬ್ಬವನ್ನ ಸ್ಪೆಷಲ್ ಆಗಿ ಆಚರಿಸಿದ್ದಕ್ಕಾಗಿ ಪತ್ನಿ ಅಮೂಲ್ಯ ಹಾಗೂ ದರ್ಶನ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಇತ್ತ ತಮ್ಮ ಮಾತಿಗೆ ಗೌರವ ಕೊಟ್ಟು ಬಂದಿದ್ದಕ್ಕೆ ದರ್ಶನ್ ಅವರಿಗೂ ಅಮೂಲ್ಯ ಥ್ಯಾಂಕ್ಸ್ ಹೇಳಿದ್ದಾರೆ. ಈ ಬಗ್ಗೆ ಸ್ವತಃ ಜಗದೀಶ್ ಮತ್ತು ಅಮೂಲ್ಯ ತಮ್ಮ ಟ್ವಿಟ್ಟರ್ ನಲ್ಲಿ ಫೋಟೋ ಸಮೇತ ಖುಷಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಕೂಡ ಟ್ವಿಟ್ಟರ್ ನಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡಿಕೊಂಡು ಶೇರ್ ಮಾಡುತ್ತಿದ್ದಾರೆ. For latest updates on film news subscribe our channel. Subscribe on YouTube: youtube.com/publicmusictv Like us @ facebook.com/publicmusictv Follow us @ twitter.com/publicmusictv

Комментарии

Теги:
Amulya, Surprises, Husband, Jagadish, Inviting, Darshan, Birthday, Party